ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಹೆದ್ದಾರಿಯಲ್ಲಿ ಗಂಟೆಗಳ ಕಾಲ ಬಿರು ಬಿಸಿಲಲ್ಲಿ ನಡೆಯುತ್ತಿದ್ದರು ಮತ್ತು ಬಹುಶಃ ಅವರು ಇನ್ನೂ ಕೆಲವು ದಿನಗಳವರೆಗೆ ಹೀಗೆಯೇ ಸಾಗಬಹುದು. ಈ ಲಾಕ್‌ಡೌನ್‌ನ ಆಚೆಗಿನ 'ಹೊಸ ಸಹಜತೆ' ಮತ್ತು ನಮ್ಮ ಬಂಧನದಿಂದಾಗಿ ಆತಂಕ ಮತ್ತು ಒತ್ತಡವು ಹೇಗೆ ಸುತ್ತುವರಿದಿದೆ ಎಂಬುದನ್ನು ನಾವು ಸುದೀರ್ಘವಾಗಿ ಚರ್ಚಿಸುತ್ತಿರುವಾಗ, ಇಲ್ಲೋಬ್ಬ ತಾಯಿ ನಡೆಯುತ್ತಲೇ ಹಸನ್ಮುಖಿಯಾಗಿದ್ದಾಳೆ! ಆಕೆಯ ಮಕ್ಕಳಲ್ಲಿ ಒಬ್ಬರು ಭುಜದ ಮೇಲಿದ್ದರೆ, ಮತ್ತೊಬ್ಬರು ಆಕೆಯ ತೋಳಿನಲ್ಲಿದ್ದಾರೆ, ಆಗಲೇ ಅವರಿಗೀಗ ದಣಿವಾಗಿದೆ, ಆಕೆಗೂ ತುಂಬಾ ದಣಿವಾಗಿದೆ. ಆದರೆ ಅವಳು ನಡೆಯುವುದನ್ನು ಮಾತ್ರ ನಿಲ್ಲಿಸಿಲ್ಲ, ನಗುವುದನ್ನೂ ಕೂಡ ಬಿಟ್ಟಿಲ್ಲ - ಅವರು ಹೊತ್ತಿರುವ ಭಾರವು ಹೊರೆ ಎಣಿಸದೆ ಆಕೆಗೆ ಸಂತಸವನ್ನುಂಟು ಮಾಡಿದ್ದರೆ, ಅವರು ನಿಜಕ್ಕೂ ಅದ್ಬುತವಲ್ಲವೇ?


ಟಿಪ್ಪಣಿ: ಮುಂಬೈ-ನಾಸಿಕ್ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಲಸೆ ಕಾರ್ಮಿಕರಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಗುರುತಿಸಲಾಯಿತು.ಆದರೆ ಜನಸಂದಣಿಯು ಹೆಚ್ಚಾಗುತ್ತಾ, ಮತ್ತು ವೇಗವಾಗಿ ಸಾಗುತ್ತಿರುವುದರಿಂದ, ಈ ದೃಶ್ಯವನ್ನು ಸೆರೆಹಿಡಿದ ಟಿವಿ ವರದಿಗಾರನಿಗೆ ಅವರ ಜೊತೆಗೆ ಮಾತನಾಡಲು ಸಾಧ್ಯವಾಗಿರಲಿಲ್ಲ.ಚಿತ್ರ ಕಲಾವಿದರಾದ ಲಬಾನಿ ಜಂಗಿ ಅವರು, ಮೇ 6, 2020 ರಂದು ರವೀಶ್ ಕುಮಾರ್ ಕೆ ಸಾಥ್ (ಎನ್ಡಿಟಿವಿ ಇಂಡಿಯಾ) ಕಾರ್ಯಕ್ರಮದಲ್ಲಿ ಬಿತ್ತರಿಸಿದ್ದ ಸೋಹಿತ್ ಮಿಶ್ರಾ ಅವರ ವರದಿಯಲ್ಲಿ ಈ ಚಿತ್ರಣವನ್ನು ನೋಡಿದ್ದರು. ನಂತರ ಈ ಕುರಿತು ಲಬಾನಿ ತಮ್ಮ ಮಾತುಗಳಲ್ಲಿ ಅವರ ಭಾವನೆಗಳನ್ನು ವ್ಯಕ್ತಪಡಿಸಿದ್ದನ್ನು ಸ್ಮಿತಾ ಖಾಟೋರ್ ಕೇಳಿಸಿಕೊಂಡು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ.
ಅನುವಾದ - ಎನ್. ಮಂಜುನಾಥ್