“ಮೊದಲ ಸಲ ಹಂಗುಲ್ ನೋಡಿದ ಸಂದರ್ಭದಲ್ಲಿ ಒಂದು ಕ್ಷಣ ಅದರತ್ತ ಎಷ್ಟು ಆಕರ್ಷಿತನಾಗಿದ್ದೆ ಎಂದರೆ ನನಗೆ ಸ್ವಲ್ಪ ಹೊತ್ತು ಮುಂದಕ್ಕೆ ಹೋಗಲು ಸಾಧ್ಯವಾಗಲೇ ಇಲ್ಲ” ಎಂದು ನೆನಪಿಸಿಕೊಳ್ಳುತ್ತಾರೆ ಶಬೀರ್ ಹುಸೇನ್ ಭಟ್. ಅದರ ಇನ್ನೊಂದು ನೋಟಕ್ಕಾಗಿ ಅವರು ಆ ಸ್ಥಳಕ್ಕೆ ಮತ್ತೆ ಮತ್ತೆ ಹೋಗುತ್ತಲೇ ಇದ್ದರು. ಈ ಜಿಂಕೆ (ಸೆರ್ವಸ್ ಎಲಾಫಸ್ ಹಂಗ್ಲು/ Cervus elaphus hanglu) ಜಾತಿಯ ಪ್ರಾಣಿ ಕಾಶ್ಮೀರಕ್ಕೆ ಸ್ಥಳೀಯವಾಗಿದ್ದು ಪ್ರಸ್ತುತ ತೀವ್ರ ಅಳಿವಿನಂಚಿನಲ್ಲಿದೆ .
ಈಗ ಸುಮಾರು 20 ವರ್ಷಗಳ ನಂತರವೂ 41 ಚದರ ಕಿಲೋಮೀಟರ್ ವಿಸ್ತೀರ್ಣದ ಈ ಉದ್ಯಾನದಲ್ಲಿನ ಪ್ರಾಣಿ, ಪಕ್ಷಿ, ಮರ ಮತ್ತು ಹೂವುಗಳ ಮೇಲಿನ ಮೋಹ ಕಡಿಮೆಯಾಗಿಲ್ಲ ಎನ್ನುತ್ತಾರೆ ಶಬೀರ್. "ನನ್ನೊಳಗೆ ಕಿಡಿಯನ್ನು ಹೊತ್ತಿಸಿದ್ದು ಹಂಗುಲ್ ಮತ್ತು ಹಿಮಾಲಯನ್ ಬ್ಲ್ಯಾಕ್ ಕರಡಿ ನನ್ನ ದೃಢ ಅಭಿಪ್ರಾಯ."
ಈ ಅಭಯಾರಣ್ಯದಲ್ಲಿ, ಅವರನ್ನು ಪ್ರೀತಿಯಿಂದ 'ದಶಿಗಾಮ್ ವಿಶ್ವಕೋಶ' ಎಂದು ಕರೆಯಲಾಗುತ್ತದೆ. "ನಾನು ಇಲ್ಲಿಯವರೆಗೆ ಈ ಪ್ರದೇಶದಲ್ಲಿ 400 ಜಾತಿಯ ಸಸ್ಯಗಳು, 200ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಮತ್ತು ಬಹುತೇಕ ಎಲ್ಲಾ ಪ್ರಾಣಿ ಪ್ರಭೇದಗಳನ್ನು ಗುರುತಿಸಿದ್ದೇನೆ" ಎಂದು ಅವರು ಹೇಳುತ್ತಾರೆ. ಈ ಅಭಯಾರಣ್ಯದಲ್ಲಿ ಕಂಡುಬರುವ ಇತರ ಕಾಡು ಪ್ರಾಣಿಗಳೆಂದರೆ: ಕಸ್ತೂರಿ ಜಿಂಕೆ, ಹಿಮಾಲಯನ್ ಕಂದು ಕರಡಿ, ಹಿಮ ಚಿರತೆ ಮತ್ತು ಗೋಲ್ಡನ್ ಈಗಲ್.


ಎಡಕ್ಕೆ : ಶಬೀರ್ ದ ಶಿಗಾ ಮ್ ರಾಷ್ಟ್ರೀಯ ಉದ್ಯಾನವನದ ದಟ್ಟ ಕಾಡುಗಳ ಒಳಗೆ ಪ್ರಾಣಿಗಳನ್ನು ತೋರಿಸಲು ಸಂದರ್ಶಕರ ಗುಂಪನ್ನು ಕರೆದೊಯ್ಯುತ್ತಾ ರೆ . ಬಲ : ಅಭಯಾರಣ್ಯದಲ್ಲಿನ ಸಂದರ್ಶಕರು


ಎಡ: ದಚಿಗಾಮ್ ಅರಣ್ಯದ ಓಕ್ ಮರಗಳ ಬಳಿ ತಂಗಿರುವ ಹೆಣ್ಣು ಹಂಗುಲ್ ಜಿಂಕೆಗಳ ಗುಂಪು. ಬಲ: ದಗ್ವಾನ್ ನದಿಯು ಮರ್ಸರ್ ಕೆರೆಯ ಮೂಲಕ ಹುಟ್ಟಿ ಪೂರ್ತಿ ಅಭಯಾರಣ್ಯದ ಒಳಗೆ ಹರಿಯುತ್ತದೆ ಮತ್ತು ಇದೇ ನದಿ ಇಲ್ಲಿನ ಪ್ರಾಣಿಗಳಿಗೆ ನೀರಿನ ಮೂಲ
ಶಬೀರ್ ಪ್ರಕೃತಿ ತಜ್ಞನಾಗಿ ಅಭಯಾರಣ್ಯ ಸೇರಿದವರಲ್ಲ. ಅವರು ಇಲ್ಲಿ ಸೇರಿದ್ದು ದಚಿಗಾಮ್ ಅರಣ್ಯದಲ್ಲಿ ಸಫಾರಿಗಾಗಿ ಪ್ರವಾಸಿಗರಿಗೆ ಬಳಸುವ ಬ್ಯಾಟರಿ ಚಾಲಿತ ವಾಹನಗಳ ಚಾಲಕನಾಗಿ. ಮುಂದೆ ಕಾಡಿನ ಕುರಿತಾದ ಜ್ಞಾನ ಬೆಳೆಯುತ್ತಾ ಹೋದಂತೆ ಅವರು ಗೈಡ್ ಆದರು. ಇದೀಗ ಈ ವಿಚಾರದಲ್ಲಿ ಪ್ರಸಿದ್ಧರಾಗಿರುವ ಅವರು 2006ರಲ್ಲಿ ಅವರು ರಾಜ್ಯ ವನ್ಯಜೀವಿ ಇಲಾಖೆಯ ಉದ್ಯೋಗಿಯಾದರು.
ಒಂದು ಕಾಲದಲ್ಲಿ ಹಂಗುಲ್ ಜಿಂಕೆಗಳನ್ನು ಝನ್ಸ್ಕಾರ್ ಪರ್ವತದಲ್ಲಿ ಎಲ್ಲೆಡೆ ಕಾಣಬಹುದಿತ್ತು. ಆದರೆ ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಇಂಡಿಯಾ ಸಂಸ್ಥೆಯ 2009 ರ ವರದಿಯ ಪ್ರಕಾರ ಬೇಟೆ, ಆಕ್ರಮಣ ಮತ್ತು ಆವಾಸಸ್ಥಾನದ ವಿಘಟನೆ ಮತ್ತು ಅವನತಿಯ ಕಾರಣ ಅವುಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. 1947ರ ಸುಮಾರಿಗೆ 2,000 ಸಂಖ್ಯೆಯಲ್ಲಿದ್ದ ಕಂಗಲು ಜಿಂಕೆಗಳು ಇಂದು 170-200ಕ್ಕೆ ತಲುಪಿವೆ. ಇಂದು ಅವು ದಚಿಗಾಮ್ ಮತ್ತು ಕಾಶ್ಮೀರ ಕಣಿವೆಯ ಕೆಲವು ಅಭಯಾರಣ್ಯಗಳಿಗೆ ಸೀಮಿತವಾಗಿವೆ ಎಂದು ವರದಿ ಹೇಳುತ್ತದೆ.
ಶಬೀರ್ ಶ್ರೀನಗರ ನಿಶಾತ್ ಎನ್ನುವ ಊರಿನವರು. ಇದು ಅಭಯಾರಣ್ಯದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. ಅವರು ತಮ್ಮ ಪೋಷಕರು, ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಸೇರಿದಂತೆ ಆರು ಜನರ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಶಬೀರ್ ಬೆಳಿಗ್ಗೆಯಿಂದ ಸಂಜೆಯ ತನಕ ಪ್ರವಾಸಿಗರು ಮತ್ತು ಪ್ರಾಣಿಪ್ರಿರೊಂದಿಗೆ ಸಮಯ ಕಳೆಯುತ್ತಾರೆ. “ನೀವು ದಶಿಗಾಂ ಉದ್ಯಾನವನಕ್ಕೆ ಪ್ರವಾಸ ಹೊರಡಲು ಯೋಚಿಸಿದ್ದರೆ ಯಾವುದೇ ಸಮಯದಲ್ಲಿ ಇಲ್ಲಿಗೆ ಬರಬಹುದು. ಆದರೆ ಇಲ್ಲಿನ ಪ್ರಾಣಿಗಳನ್ನು ನೋಡುವುದು ನಿಮ್ಮ ಗುರಿಯಾಗಿದ್ದಲ್ಲಿ ಬೆಳಗ್ಗೆ ಬೇಗನೆ ಅಥವಾ ಸೂರ್ಯಾಸ್ತಕ್ಕೂ ಮೊದಲು ಬರಬೇಕು” ಎಂದು ಅವರು ಪರಿಗೆ ಮಾಹಿತಿ ನೋಡಿದರು.

ಉದ್ಯಾನದಲ್ಲಿನ ಒಂದು ಪ್ರಬುದ್ಧ ಹೆಣ್ಣು ಹಂಗುಲ್

ಕಾಶ್ಮೀರ ಹಂಗುಲ್ ನದಿಯ ಬಳಿಗೆ ಬಂದಿರುವುದು

ಪಾರ್ಕಿನಲ್ಲಿ ಕಾಣಿಸಿಕೊಂಡ ಹಿಮಾಲಯದ ಕಪ್ಪು ಕರಡಿ


ಎಡ: ಹಿಮಾಲಯದ ಬೂದು ಬಣ್ಣದ ಲಂಗೂರ್ (ಬುಕ್ಕ). ಬಲ: ದಶಿಗಾಂ ಕಾಡಿನ ಮರದಲ್ಲಿನ ಒಂದು ಹಳದಿ ಕತ್ತಿನ ಮಾರ್ಟೆನ್

ಶಬೀರ್ ಪ್ರವಾಸಿಗರಿಗೆ ಹಲವು ಬಗೆಯ ಹಕ್ಕಿಗಳನ್ನು ಪರಿಚಯಿಸುತ್ತಿರುವುದು


ಎಡ: ಬಾಲದಂಡೆ ಹಕ್ಕಿ. ಬಲ: ಬೂದು ಸಿಪಿಲೆ ಹಕ್ಕಿ


ಎಡ: ಕಂದು ಬೆನ್ನಿನ ಕಳಿಂಗ. ಬಲ: ವೆರೀಗೇಟೆಡ್ ಲಾಫಿಂಗ್ ಥ್ರಷ್
ಅನುವಾದ: ಶಂಕರ. ಎನ್. ಕೆಂಚನೂರು