“ನನಗೆ ಎಡಗಣ್ಣು ಕಾಣಿಸುವುದಿಲ್ಲ. ಪ್ರಕಾಶಮಾನವಾದ ಬೆಳಕು ನೋವು ತರುತ್ತದೆ. ಬಹಳ ನೋಯುತ್ತದೆ, ಇದರಿಂದಾಗ ನಾನು ಬಹಳ ಕಷ್ಟದಲ್ಲಿ ಬದುಕುತ್ತಿದ್ದೇನೆ” ಎಂದು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಂಗಾವ್ ಪಟ್ಟಣದ ಗೃಹಿಣಿ ಪ್ರಮೀಳಾ ನಸ್ಕರ್ ಹೇಳುತ್ತಾರೆ. ಬದುಕಿನ ನಾಲ್ಕನೇ ದಶಕದ ಆರಂಭದಲ್ಲಿರುವ ಪ್ರಮೀಳಾ ಅವರು ನಮ್ಮೊಂದಿಗೆ ಕೋಲ್ಕತ್ತಾದ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ನೇತ್ರವಿಜ್ಞಾನ ಸಂಸ್ಥೆಯ ಸಾಪ್ತಾಹಿಕ ಕಾರ್ನಿಯಾ ಕ್ಲಿನಿಕ್ಕಿನಲ್ಲಿ ಕುಳಿತು ಮಾತನಾಡುತ್ತಿದ್ದರು. ಅವರು ಅಲ್ಲಿಗೆ ಚಿಕಿತ್ಸೆಗೆಂದು ಬಂದಿದ್ದರು.
ಪ್ರಮೀಳಾ ನಸ್ಕರ್ ಅವರ ನೋವು ನನಗೆ ಪೂರ್ತಿಯಾಗಿ ಅರ್ಥವಾಗುತ್ತಿತ್ತು. ಫೋಟೋಗ್ರಾಫರ್ ಒಬ್ಬನ ಪಾಲಿಗೆ ಒಂದು ಕಣ್ಣನ್ನು ಕಳೆದುಕೊಳ್ಳುವುದೆಂದರೆ ಭಯಾನಕ ಕಲ್ಪನೆ. 2007ರಲ್ಲಿ ನನಗೂ ಕಾರ್ನಿಯಲ್ ಅಲ್ಸರ್ ಆಗಿತ್ತು. ಆ ಸಂದರ್ಭದಲ್ಲಿ ಇನ್ನೇನು ನನ್ನ ಎಡಗಣ್ಣು ದೃಷ್ಟಿ ಕಳೆದುಕೊಳ್ಳುವುದರಲ್ಲಿತ್ತು. ಆ ಸಮಯದಲ್ಲಿ ವಿದೇಶದಲ್ಲಿದ್ದ ನಾನು ಚಿಕಿತ್ಸೆಗೆಂದು ಭಾರತಕ್ಕೆ ಮರಳಬೇಕಾಯಿತು. ಪೂರ್ಣ ದೃಷ್ಟಿ ಮರಳುವ ಹೊತ್ತಿಗೆ ನಾನು ಒಂದೂವರೆ ತಿಂಗಳ ಕಾಲದ ಚಿತ್ರಹಿಂಸೆ ರೂಪದ ರೀಹ್ಯಾಬಿಲೇಷನ್ ಪ್ರಕ್ರಿಯೆಯನ್ನು ಸಹಿಸಿಕೊಂಡಿದ್ದೆ. ಇದರಿಂದ ಚೇತರಿಸಿಕೊಂಡು ಈಗ ಒಂದೂವರೆ ದಶಕ ಕಳೆದಿದ್ದರೂ ದೃಷ್ಟಿ ಕಳೆದುಕೊಳ್ಳುವ ಭಯ ಈಗಲೂ ಕಾಡುತ್ತಿದೆ. ಫೋಟೋಗ್ರಾಫರ್ ಒಬ್ಬ ತನ್ನ ದೃಷ್ಟಿ ಕಳೆದುಕೊಂಡರೆ ಅವನ ಬದುಕು ಎಂತಹ ನರಕವಾಗಿರಬಲ್ಲದು ಎನ್ನುವುದನ್ನು ಕಲ್ಪಿಸಿಕೊಂಡು ಬೆಚ್ಚಿಬೀಳುತ್ತಿರುತ್ತೇನೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಾರ, ಜಾಗತಿಕವಾಗಿ, " ಕನಿಷ್ಠ 2.2 ಬಿಲಿಯನ್ ಜನರು ಹತ್ತಿರದ ಅಥವಾ ದೂರದ ದೃಷ್ಟಿ ದೌರ್ಬಲ್ಯವನ್ನು ಹೊಂದಿದ್ದಾರೆ. ಈ ಪ್ರಕರಣಗಳಲ್ಲಿ ಕನಿಷ್ಠ 1 ಬಿಲಿಯನ್ ಅಥವಾ ಅರ್ಧದಷ್ಟು ಪ್ರಕರಣಗಳಲ್ಲಿ, ದೃಷ್ಟಿ ದೌರ್ಬಲ್ಯವನ್ನು ತಡೆಗಟ್ಟಬಹುದಿತ್ತು ಅಥವಾ ಇನ್ನೂ ಅದಕ್ಕೆ ಚಿಕಿತ್ಸೆ ಆರಂಭವಾಗಿರಲಿಲ್ಲ..."
ಕಣ್ಣಿನ ಪೊರೆಯ ನಂತರ ವಿಶ್ವಾದ್ಯಂತ ಕುರುಡುತನಕ್ಕೆ ಎರಡನೇ ಸಾಮಾನ್ಯ ಕಾರಣವೆಂದರೆ ಕಾರ್ನಿಯಲ್ ಕಾಯಿಲೆಗಳು. ಕಾರ್ನಿಯಲ್ ಕುರುಡುತನದ ಸಾಂಕ್ರಾಮಿಕ ರೋಗ ವಿವರಣೆ ಸಂಕೀರ್ಣವಾಗಿದೆ ಮತ್ತು ಕಾರ್ನಿಯಲ್ ಕಲೆಗೆ ಕಾರಣವಾಗುವ ವ್ಯಾಪಕ ಶ್ರೇಣಿಯ ಉರಿಯೂತ ಮತ್ತು ವೈರಲ್ ಪರಿಸ್ಥಿತಿಗಳನ್ನು ಇದು ಒಳಗೊಂಡಿದೆ, ಇದು ಅಂತಿಮವಾಗಿ ಕ್ರಿಯಾತ್ಮಕ ಕುರುಡುತನಕ್ಕೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ಕಾರ್ನಿಯಲ್ ಕಾಯಿಲೆಯ ಆವರ್ತನ ಕಾಲ ದೇಶದಿಂದ ದೇಶಕ್ಕೆ ಬದಲಾಗುತ್ತದೆ.


ಈ ಕಾಯಿಲೆಯಲ್ಲಿ ಕಣ್ಣಿನ ನೋವಿನ ತೀವ್ರತೆಯು ಸಾಧಾರಣ ನೋವಿನಿಂದ ಹಿಡಿದು ತೀವ್ರ ನೋವಿನ ತನಕ ಇರುತ್ತದೆ. ಕಾರ್ನಿಯಲ್ ಎನ್ನುವುದು ಕುರುಡುತನದ ಹಲವಾರು ಲಕ್ಷಣಗಳಲ್ಲಿ ಒಂದು. ಇದರ ಇತರ ವಿಶಿಷ್ಟ ರೋಗಲಕ್ಷಣಗಳಲ್ಲಿ ಬೆಳ ಕಿಗೆ ಕಣ್ಣೊಡ್ಡಲು ಸಾಧ್ಯವಾಗದಿರುವುದು , ಮಸುಕಾದ ದೃಷ್ಟಿ , ಕ ಣ್ಣು ಸೋರುವುದು , ಕಣ್ಣುಗಳಲ್ಲಿ ನೀರು ಬರುವುದು ಇತ್ಯಾದಿ ಸೇರಿವೆ. ಈ ರೋಗಲಕ್ಷಣಗ ಳು ಇತರ ಕಾಯಿಲೆಗಳನ್ನು ಸಹ ಸೂಚಿಸಬಹುದಾದರೂ , ಆರಂಭದಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ ದಿರುವ ಸಾಧ್ಯತೆಯಿದೆ , ಆದ್ದರಿಂದ ಕಣ್ಣಿನ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ
ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ಕ್ಲಿನಿಕಲ್ ಇನ್ವೆನ್ಷನ್ ನಡೆಸಿದ 2018ರ ಅಧ್ಯಯನವು ಭಾರತ ಕಾರ್ನಿಯಲ್ ಕಾಯಿಲೆಗಳಿಂದಾಗಿ ಕನಿಷ್ಠ ಒಂದು ಕಣ್ಣಿನಲ್ಲಿ 6/60 ಕ್ಕಿಂತ ಕಡಿಮೆ ದೃಷ್ಟಿ ಹೊಂದಿರುವ ಸುಮಾರು 6.8 ಮಿಲಿಯನ್ ಜನರನ್ನು ಹೊಂದಿದೆ ಎಂದು ಅಂದಾಜಿಸಿದೆ; ಇವರಲ್ಲಿ, ಸುಮಾರು ಒಂದು ಮಿಲಿಯನ್ ಜನರು ಮುಂದೆ ಎರಡೂ ಕಣ್ಣುಗಳನ್ನು ಕಳೆದುಕೊಳ್ಳುವ ಸಾಧ್ಯತೆಯನ್ನೂ ಹೊಂದಿತ್ತು. ಸಾಮಾನ್ಯವಾಗಿ, 6/60 ದೃಷ್ಟಿ ಎಂದರೆ ಸಾಮಾನ್ಯ ದೃಷ್ಟಿ ಹೊಂದಿರುವ ವ್ಯಕ್ತಿಯು 60 ಮೀಟರ್ ದೂರದಿಂದ ನೋಡಬಹುದಾದದ್ದನ್ನು 6 ಮೀಟರ್ ದೂರದಿಂದಲಷ್ಟೇ ನೋಡಲು ಸಾಧ್ಯವಾಗುವುದು. 2020ರ ವೇಳೆಗೆ ಈ ಸಂಖ್ಯೆ 10.6 ಮಿಲಿಯನ್ ತಲುಪಬಹುದು ಎಂದು ಅಧ್ಯಯನವು ನಿರೀಕ್ಷಿಸಿದೆ - ಆದರೆ ಯಾವುದೇ ಸ್ಪಷ್ಟ ಹೊಸ ಮಾಹಿತಿ ಲಭ್ಯವಿಲ್ಲ.
ಇಂಡಿಯನ್ ಜರ್ನಲ್ ಆಫ್ ಆಪ್ಥಾಲ್ಮಾಲಜಿಯಲ್ಲಿ ಪ್ರಕಟವಾದ ಒಂದು ಲೇಖನವು "ಭಾರತದಲ್ಲಿ ಕಾರ್ನಿಯಲ್ ಅಂಧತ್ವ (ಸಿಬಿ/ಕಾರ್ನಿಯಲ್ ಬ್ಲೈಂಡ್‌ನೆಸ್) ಹೊಂದಿರುವವರ ಸಂಖ್ಯೆ 1.2 ಮಿಲಿಯನ್, ಇದು ಒಟ್ಟು ಕುರುಡುತನದ ಶೇಕಡಾ 0.36 ರಷ್ಟಿದೆ; ಪ್ರತಿ ವರ್ಷ ಸುಮಾರು 25,000ರಿಂದ 30,000 ಜನರು ಈ ಸಂಖ್ಯೆಗೆ ಸೇರ್ಪಡೆಯಾಗುತ್ತಾರೆ. ಪ್ರಾದೇಶಿಕ ನೇತ್ರವಿಜ್ಞಾನ ಸಂಸ್ಥೆಯನ್ನು (ಆರ್‌ಐಒ) 1978 ರಲ್ಲಿ ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪಿಸಲಾಯಿತು. ಸಂಸ್ಥೆಯ ಪ್ರಸ್ತುತ ನಿರ್ದೇಶಕ ಪ್ರೊ.ಅಸೀಮ್ ಕುಮಾರ್ ಘೋಷ್ ಅವರ ಉಸ್ತುವಾರಿಯಲ್ಲಿ ಆರ್‌ಐಒ ಗಣನೀಯ ಬೆಳವಣಿಗೆಯನ್ನು ಕಂಡಿದೆ. ವಾರಕ್ಕೊಮ್ಮೆ ನಡೆಯುವ ಆರ್ಐಒನ ಕಾರ್ನಿಯಾ ಕ್ಲಿನಿಕ್ನಲ್ಲಿ ಒಂದೇ ದಿನ 150ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ.
ಡಾ.ಆಶಿಶ್ ಮಜುಂದಾರ್ ಮತ್ತು ಅವರ ಸಹವರ್ತಿಗಳು ನಡೆಸುತ್ತಿರುವ ಈ ಕ್ಲಿನಿಕ್ ಹೆಚ್ಚು ಅಗತ್ಯವಿರುವವರಿಗೆ ಸಹಾಯ ಮಾಡುತ್ತದೆ. ಡಾ. ಆಶಿಶ್ ಅವರು ನನ್ನ ಸ್ವಂತ ಪ್ರಕರಣವನ್ನು ಉಲ್ಲೇಖಿಸಿ ಹೇಳಿದರು, "ನಿಮಗೆ ನಕಲಿ ಕಾಂಟ್ಯಾಕ್ಟ್ ಲೆನ್ಸ್ ದ್ರಾವಣದಿಂದ ಕಾರ್ನಿಯಲ್ ಅಲ್ಸರ್ ಬಂದಿದ್ದರೂ, 'ಕಾರ್ನಿಯಲ್ ಕುರುಡುತನ' ಎಂಬ ಪದವು ಕಾರ್ನಿಯಾದ ಪಾರದರ್ಶಕತೆಯನ್ನು ಬದಲಾಯಿಸುವ ವಿವಿಧ ಕಣ್ಣಿನ ಪರಿಸ್ಥಿತಿಗಳನ್ನು ವಿವರಿಸುತ್ತದೆ, ಇದು ಕಲೆ ಮತ್ತು ಕುರುಡುತನಕ್ಕೆ ಕಾರಣವಾಗುತ್ತದೆ. ಕಾರ್ನಿಯಲ್ ಕುರುಡುತನದ ಪ್ರಮುಖ ಕಾರಣಗಳಲ್ಲಿ ಸಾಂಕ್ರಾಮಿಕ ಕಾರಣಗಳು ಸೇರಿವೆ, ಅಂದರೆ, ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರಗಳು ಮತ್ತು ಪ್ರೋಟೋಜೋವಾ. ಆಘಾತ, ಕಾಂಟ್ಯಾಕ್ಟ್ ಲೆನ್ಸ್ ಬಳಕೆ, ಅಥವಾ ಸ್ಟೀರಾಯ್ಡ್ ಔಷಧಿಗಳ ಬಳಕೆಯು ಅತ್ಯಂತ ಸಾಮಾನ್ಯ ಪೂರ್ವಭಾವಿ ಅಂಶಗಳಾಗಿವೆ. ಟ್ರಕೋಮಾ ಮತ್ತು ಒಣ ಕಣ್ಣಿನ ಕಾಯಿಲೆಗಳು ಸೇರಿದಂತೆ ಇತರ ಹಲವಾರು ರೋಗಗಳು ಸೇರಿವೆ.”
ಬದುಕಿನ ನಾಲ್ಕನೇ ದಶಕದ ನಡುವಿನಲ್ಲಿರುವ ನಿರಂಜನ್ ಮಂಡಲ್ ಅವರು ಆರ್‌ಐಒನ ಕಾರ್ನಿಯಾ ಕ್ಲಿನಿಕ್ ನ ಒಂದು ಮೂಲೆಯಲ್ಲಿ ಸದ್ದಿಲ್ಲದೆ ನಿಂತಿದ್ದರು. ಅವರು ಕಪ್ಪು ಕನ್ನಡಕ ಧರಿಸಿದ್ದರು. "ನನ್ನ ಎಡಗಣ್ಣಿನ ಕಾರ್ನಿಯಾ ಹಾನಿಗೊಂಡಿದೆ" ಎಂದು ಅವರು ನನಗೆ ಹೇಳಿದರು. "ನೋವು ಮಾಯವಾಗಿದೆ. ಆದರೆ ದೃಷ್ಟಿ ಇನ್ನೂ ಮಸುಕಾಗಿದೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದರು. ನಾನು ನಿರ್ಮಾಣ ಕಂಪನಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೇನೆ ಒಂದು ವೇಳೆ ನನಗೆ ಎರಡೂ ಕಣ್ಣುಗಳಲ್ಲಿ ಸರಿಯಾಗಿ ನೋಡಲು ಸಾಧ್ಯವಾಗದಿದ್ದರೆ, ಅದೇ ವೃತ್ತಿಯಲ್ಲಿ ಮುಂದುವರಿಯುವುದು ಕಷ್ಟವಾಗುತ್ತದೆ.”
ನಿರಂಜನ್ ಅವರೊಂದಿಗೆ ಮಾತನಾಡುವಾಗ, ಇನ್ನೊಬ್ಬ ವೈದ್ಯರು ಶೇಖ್ ಜಹಾಂಗೀರ್ (ನಲವತ್ತರ ಆಸುಪಾಸಿನ ವಯಸ್ಸು) ಎಂಬ ರೋಗಿಯನ್ನು ಮೃದುವಾಗಿ ಬೈಯುವುದನ್ನು ನಾನು ಕೇಳಿದೆ: "ನಾನು ನಿಮಗೆ ನಿಲ್ಲಿಸಬಾರದು ಎಂದು ಹೇಳಿದ ನಂತರವೂ ನೀವು ಚಿಕಿತ್ಸೆಯನ್ನು ಏಕೆ ನಿಲ್ಲಿಸಿದ್ದೀರಿ. ಈಗ ನೀವು 2 ತಿಂಗಳ ನಂತರ ಇಲ್ಲಿಗೆ ಬಂದಿದ್ದೀರಿ. ನಿಮ್ಮ ಬಲಗಣ್ಣಿನ ಪೂರ್ಣ ದೃಷ್ಟಿ ಎಂದಿಗೂ ಮರಳಿ ಬರುವುದಿಲ್ಲ ಎಂದು ಹೇಳಲು ನನಗೆ ವಿಷಾದವೆನ್ನಿಸುತ್ತದೆ."
ಇದೇ ಕಾಳಜಿ ಡಾ. ಆಶಿಶ್ ಅವರ ಧ್ವನಿಯಲ್ಲಿ ಪ್ರತಿಧ್ವನಿಸುತ್ತದೆ. ಅವರು ಹೇಳುತ್ತಾರೆ, "ಅನೇಕ ಸಂದರ್ಭಗಳಲ್ಲಿ, ರೋಗಿಯನ್ನು ಸಮಯಕ್ಕೆ ಸರಿಯಾಗಿ ಕರೆತಂದಿದ್ದರೆ ಕಣ್ಣನ್ನು ಉಳಿಸಬಹುದಿತ್ತು. ಕಾರ್ನಿಯಲ್ ಹಾನಿಯಿಂದ ಚೇತರಿಸಿಕೊಳ್ಳುವುದು ದೀರ್ಘ ಮತ್ತು ಬೇಸರದ ಪ್ರಕ್ರಿಯೆ ಮತ್ತು ಚಿಕಿತ್ಸೆಯನ್ನು ನಿಲ್ಲಿಸುವುದು ಕುರುಡುತನಕ್ಕೆ ಕಾರಣವಾಗಬಹುದು.”


ಎಡ: ನಿರಂಜನ್ ಮಂಡಲ್ , ಚಿಕಿತ್ಸೆಗಾಗಿ ಕೋಲ್ಕತ್ತಾದ ಪ್ರಾದೇಶಿಕ ನೇತ್ರವಿಜ್ಞಾನ ಸಂಸ್ಥೆಗೆ (ಆ ರ್‌ಐಒ ) ಬಂ ದಿದ್ದರು . ಇದು ಅವರ ಸತತ ನಾಲ್ಕನೇ ಭೇಟಿ. ಬಲ: ರಿಯೋ ನಿರ್ದೇಶಕ ಡಾ.ಅಸಿಮ್ ಕುಮಾರ್ ಘೋಷ್ ಅವರು ರೋಗಿಯನ್ನು ತಮ್ಮ ಕೋಣೆಯಲ್ಲಿ ಪರಿಶೀಲಿಸು ತ್ತಿದ್ದಾರೆ
ಆದರೆ ರೋಗಿಗಳು ಆರ್‌ಐಒಗೆ ಸರಿಯಾಗಿ ಬಾರದ ಕಾರಣ ಕಾಯಿಲೆಯನ್ನು ನಿಭಾಯಿಸುವಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಉದಾಹರಣೆಗೆ ಬದುಕಿ ಐದನೇ ದಶಕದ ಕೊನೆಯಲ್ಲಿರುವ ನಾರಾಯಣ ಸನ್ಯಾಲ್, ಅವರು ನಮಗೆ ಹೇಳಿದರು, "ನಾನು ಹೂಗ್ಲಿ ಜಿಲ್ಲೆಯ ದೂರದ ಸ್ಥಳದಲ್ಲಿ [ಖಾನಕುಲ್] ವಾಸಿಸುತ್ತಿದ್ದೇನೆ. ನನಗೆ ತಪಾಸಣೆಗಾಗಿ ಸ್ಥಳೀಯ ವೈದ್ಯರ ಬಳಿಗೆ ಹೋಗುವುದು ಸುಲಭ. ಆ ವೈದ್ಯರು ಅರ್ಹರಲ್ಲ ಎಂದು ನನಗೆ ತಿಳಿದಿದೆ ಆದರೆ ಏನು ಮಾಡಬೇಕು? ನಾನು ನೋವನ್ನು ನಿರ್ಲಕ್ಷಿಸಿ ಕೆಲಸ ಮಾಡುತ್ತಲೇ ಇರುತ್ತೇನೆ. ಇಲ್ಲಿಗೆ ಬಂದರೆ, ಪ್ರತಿ ಬಾರಿಯೂ ಸರಿಸುಮಾರು 400 ರೂಪಾಯಿಗಳು ಖರ್ಚಾಗುತ್ತವೆ. ಅದನ್ನು ಭರಿಸಲು ಸಾಧ್ಯವಿಲ್ಲ."
ದಕ್ಷಿಣ 24 ಪರಗಣದ ಪಥೋರ್ಪ್ರೊಟಿಮಾ ಬ್ಲಾಕ್ ನಿವಾಸಿ ಪುಷ್ಪರಾಣಿ ದೇವಿ ಕೂಡ ಇದೇ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅವರು ಕಳೆದ 10 ವರ್ಷಗಳಿಂದ ತಮ್ಮ ಇಬ್ಬರು ಮಕ್ಕಳೊಂದಿಗೆ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ. ಮನೆಗೆಲಸ ಅವರ ವೃತ್ತಿ. “ಎಡಗಣ್ಣು ಕೆಂಪಾಗುತ್ತಿತ್ತು. ಆದರೆ ಅದನ್ನು ನಾನು ನಿರ್ಲಕ್ಷಿಸಿದೆ. ಸ್ಥಳೀಯ ವೈದ್ಯರೊಬ್ಬರ ಬಳಿಯೇ ಚಿಕಿತ್ಸೆ ತೆಗೆದುಕೊಂಡೆ, ಆದರೆ ಅದು ಗಂಭೀರ ಸ್ವರೂಪಕ್ಕೆ ತಿರುಗಿ ನಾನು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಬೇಕಾಯಿತು. ನಂತರ ನಾನು ಇಲ್ಲಿಗೆ [ಆರ್‌ಐಒ] ಬಂದೆ. ಮೂರು ತಿಂಗಳು ನಿಯಮಿತ ತಪಾಸಣೆಯ ನಂತರ ಈಗ ದೃಷ್ಟಿ ಮರಳಿದೆ, ಪೂರ್ಣ ದೃಷ್ಟಿ ಬರಲು ಶಸ್ತ್ರಚಿಕಿತ್ಸೆ [ಕಾರ್ನಿಯಲ್ ಕಸಿ] ಅಗತ್ಯವಿದೆ. ಈಗ ನನ್ನ ಸರದಿಗಾಗಿ ಕಾಯುತ್ತಿದ್ದೇನೆ.”
ಕಾರ್ನಿಯಾ ಕಸಿ ಎಂದು ಕರೆಯಲ್ಪಡುವ ಶಸ್ತ್ರಚಿಕಿತ್ಸೆಯು ಹಾನಿಗೊಳಗಾದ ಕಾರ್ನಿಯಾವನ್ನೂ ಪೂರ್ತಿಯಾಗಿ ಅಥವಾ ಭಾಗಶಃ ತೆಗೆದುಹಾಕಿ ಅದರ ಜಾಗದಲ್ಲಿ ದಾನಿ ಅಂಗಾಂಶವನ್ನು ಜೋಡಿಸಲಾಗುತ್ತದೆ. ಕಾರ್ನಿಯಲ್ ಕಸಿಯನ್ನು ವಿವರಿಸಲು ಕೆರಾಟೊಪ್ಲಾಸ್ಟಿ ಮತ್ತು ಕಾರ್ನಿಯಲ್ ಕಸಿ ಎಂಬ ಪದಗಳನ್ನು ಆಗಾಗ್ಗೆ ಬಳಸಲಾಗುತ್ತದೆ. ಗಂಭೀರ ಸೋಂಕುಗಳು ಅಥವಾ ಹಾನಿಯನ್ನು ಗುಣಪಡಿಸಲು, ದೃಷ್ಟಿಯನ್ನು ಸುಧಾರಿಸಲು ಮತ್ತು ಅಸ್ವಸ್ಥತೆಯನ್ನು ನಿವಾರಿಸಲು ಇದನ್ನು ಬಳಸಬಹುದು. ಡಾ.ಆಶಿಶ್, ತಿಂಗಳಿಗೆ ಸುಮಾರು 4ರಿಂದ 16 ಕಾರ್ನಿಯಲ್ ಕಸಿಗಳನ್ನು ಮಾಡುತ್ತಾರೆ. ಇದು ಸೂಕ್ಷ್ಮ ಶಸ್ತ್ರಚಿಕಿತ್ಸೆಯಾಗಿದ್ದು, 45 ನಿಮಿಷಗಳಿಂದ 3 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ. ಆಶಿಶ್ ಹೇಳುತ್ತಾರೆ, "ಕಸಿಯ ನಂತರದ ಯಶಸ್ಸಿನ ಪ್ರಮಾಣವು ತುಂಬಾ ಹೆಚ್ಚಾಗಿದೆ. ಮತ್ತು ರೋಗಿಗಳು ಸುಲಭವಾಗಿ ತಮ್ಮ ಕೆಲಸಕ್ಕೆ ಮರಳಬಹುದು. ಸಮಸ್ಯೆ ಬೇರೆಯೇ ಆಗಿದೆ. ಪೂರೈಕೆ ಮತ್ತು ಬೇಡಿಕೆಯ ನಡುವೆ ಅಂತರವಿದೆ , ಅದು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಕುಟುಂಬಗಳು ನೇತ್ರದಾನ ಮಾಡಲು ಮುಂದೆ ಬರಬೇಕು.' ಬಂಗಾಳ ಮತ್ತು ಭಾರತದಲ್ಲಿ ಭಾರಿ ಬೇಡಿಕೆ-ಪೂರೈಕೆ ನಡುವೆ ಅಂತರವಿದೆ.
ಆರ್‌ಐಒ ನಿರ್ದೇಶಕ ಡಾ.ಅಸೀಮ್ ಘೋಷ್ ಅವರು ಈ ಸಂದೇಶವನ್ನು ನೀಡುತ್ತಾರೆ: "ಹೆಚ್ಚಿನ ಜನರಿಗೆ ಕಾರ್ನಿಯಲ್ ಕಸಿ ಅಗತ್ಯವಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ದಯವಿಟ್ಟು ಆರಂಭಿಕ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಮೊದಲು ನಿಮ್ಮ ಸ್ಥಳೀಯ ನೇತ್ರತಜ್ಞರನ್ನು ಭೇಟಿಯಾಗಿ. ಅನೇಕ ರೋಗಿಗಳು ನಮ್ಮ ಬಳಿಗೆ ಬಂದು ಕೊನೆಯ ಕ್ಷಣದಲ್ಲಿ ಕಣ್ಣನ್ನು ಉಳಿಸಲು ಕೇಳಿದಾಗ ನಮಗೆ ಬೇಸರವಾಗುತ್ತದೆ. ಇದನ್ನು ನೋಡಿ ವೈದ್ಯರಾಗಿ ನಮಗೆ ನೋವಾಗುತ್ತದೆ.”
ಅಲ್ಲದೆ, ಡಾ.ಘೋಷ್ ಹೇಳುತ್ತಾರೆ, "ನೀವು ಆರೋಗ್ಯಕರ ಜೀವನಶೈಲಿಯನ್ನು ಹೊಂದಿರುವುದು ಮುಖ್ಯ. ಸಕ್ಕರೆ ಮಟ್ಟವನ್ನು ಪರೀಕ್ಷಿಸಿ. ಮಧುಮೇಹವು ಕಾರ್ನಿಯಾ ಮತ್ತು ಇತರ ಕಣ್ಣಿನ ಸಂಬಂಧಿತ ಅಸ್ವಸ್ಥತೆಗಳ ಚಿಕಿತ್ಸೆಯನ್ನು ಹೆಚ್ಚು ಸಂಕೀರ್ಣಗೊಳಿಸುತ್ತದೆ.”
"ಆಸ್ಪತ್ರೆಯ ಕಾರಿಡಾರಿನಲ್ಲಿ ನಾನು ಅರವತ್ತರ ಪ್ರಾಯದ ಅವರಾನಿ ಚಟರ್ಜಿ ಅವರನ್ನು ಭೇಟಿಯಾದೆ. ಅವರು ಸಂತೋಷದಲ್ಲಿದ್ದರು: "ಡಾಕ್ಟರ್ ಇನ್ನು ಬರುವುದು ಬೇಡ ಎಂದಿದ್ದಾರೆ. ನನ್ನ ಕಣ್ಣುಗಳು ಸಾರಿಯಾಗಿವೆ. ಈಗ ನಾನು ನನ್ನ ಮೊಮ್ಮಗಳೊಂದಿಗೆ ಸಮಯ ಕಳೆಯಬಹುದು ಮತ್ತು ಟಿವಿಯಲ್ಲಿ ನನ್ನ ನೆಚ್ಚಿನ ಧಾರಾವಾಹಿಯನ್ನು ನೋಡಬಹುದು.”

ಪಶ್ಚಿಮ ಬಂಗಾಳ ಸರ್ಕಾರದ ಪ್ರಮುಖ ಯೋಜನೆಯಾದ ಸ್ವಾಸ್ಥ್ಯ ಸತಿ ಯೋಜನೆ ರೋಗಿಗಳನ್ನು ಉಚಿತ ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ಕರೆತರುತ್ತದೆ . ಇದು ಕಾರ್ನಿಯಾ ಮತ್ತು ಕಣ್ಣಿನ ಇತರ ಕಾಯಿಲೆಗಳ ಚಿಕಿತ್ಸಾಲಯಗಳಲ್ಲಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ವೈದ್ಯರು ಈ ಹೆಚ್ಚಳವನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಭಾಯಿಸಲು ಕಷ್ಟಪಡುತ್ತಿದ್ದಾರೆ

ಒಳಗಣ್ಣಿನ ಹೆಚ್ಚು ಆಳವಾದ ತಪಾಸಣೆಗೆ ಅನುವು ಮಾಡಿಕೊಡಲು , ವೈದ್ಯರು ಕಣ್ಣಿನ ಹನಿಯನ್ನು ಹಾಕಿ ಪಾಪೆಗಳನ್ನು ಹಿಗ್ಗಿಸುತ್ತಾರೆ . ಕಣ್ಣಿನ ಗಾತ್ರವನ್ನು ನಿಯಂತ್ರಿಸುವ ಸ್ನಾಯುಗಳನ್ನು ಸಡಿಲಗೊಳಿಸುವ ಫಿನೈಲೆಫ್ರಿನ್ ಅಥವಾ ಟ್ರೋಪಿಕಾಮೈಡ್ ರೀತಿಯ ಔಷಧಿಗಳು ಸಾಮಾನ್ಯವಾಗಿ ಈ ಹನಿಗಳಲ್ಲಿ ಕಂಡುಬರುತ್ತವೆ. ನೇತ್ರತಜ್ಞರು ಕಣ್ಣಿನ ಹಿಂಭಾಗದಲ್ಲಿರುವ ರೆಟಿನಾ , ಆಪ್ಟಿಕ್ ನರ ಮತ್ತು ಇತರ ಅಂಗಾಂಶಗಳನ್ನು ಕಣ್ಣಿನ ಹಿಗ್ಗುವಿಕೆಯ ಮೂಲಕ ಹೆಚ್ಚು ಸ್ಪಷ್ಟವಾಗಿ ನೋಡಬಹುದು. ಮಾಕ್ಯುಲರ್ ಡಿಜೆನರೇಶನ್ , ಡಯಾಬಿಟಿಕ್ ರೆಟಿನೋಪತಿ ಮತ್ತು ಗ್ಲಾಕೋಮಾ ಸೇರಿದಂತೆ ಹಲವಾರು ಕಣ್ಣಿನ ಕಾಯಿಲೆಗಳನ್ನು ಪತ್ತೆಹಚ್ಚಲು ಇದು ವಿಶೇಷವಾಗಿ ಅಗತ್ಯ

ಡಾ. ಆಶಿಶ್ ಮಜುಂದಾರ್ ಅವರು ಕಿವಿ ಕೇಳದ ಹಾಗೂ ಮಾತನಾಡಲು ಸಾಧ್ಯವಿಲ್ಲದ ಅಂಗವಿಕಲ ರೋಗಿಯ ಕಣ್ಣುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸು ತ್ತಿದ್ದಾರೆ

ಭಾರತವು ಪ್ರತಿವರ್ಷ ಸುಮಾರು 30,000 ಕಾರ್ನಿಯಲ್ ಕುರುಡುತನದ ಪ್ರಕರಣಗಳನ್ನು ಕಾಣುತ್ತದೆ

ರೋಗಲಕ್ಷಣಗಳನ್ನು ಹೊಂದಿದ್ದರೆ ಕಣ್ಣಿನ ಆರೈಕೆ ಯನ್ನು ಬಲ್ಲ ವೃತ್ತಿಪರರೊಂದಿಗೆ ಸಮಾಲೋಚನೆ ಅತ್ಯಗತ್ಯ

ಕಾರ್ನಿಯಲ್ ಸಮಸ್ಯೆಗಳಿರುವ ಚಿಕ್ಕ ಹುಡುಗನನ್ನು ವೈದ್ಯಕೀಯ ಕಾಲೇ ಜಿನ ಕಣ್ಣಿನ ಬ್ಯಾಂ ಕ್ ಮೇಲ್ವಿಚಾರಣೆ ಮಾಡುವ ಡಾ.ಇಂದ್ರಾಣಿ ಬ್ಯಾನರ್ಜಿ ಪರೀಕ್ಷಿಸು ತ್ತಿದ್ದಾರೆ

ಕಣ್ಣೀರನ್ನು ಅಳೆಯಲು ಶಿರ್ಮರ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಕುರುಡುತನಕ್ಕೆ ಕಾರ್ನಿಯಲ್ ಸಂಬಂಧಿತ ಪ್ರಮುಖ ಕಾರಣವೆಂದರೆ ಕಣ್ಣು ಒಣಗುವುದು

ಸುಬಾಲ್ ಮಜುಂದಾರ್ ಎನ್ನುವವರ ಕಣ್ಣಿಗೆ ಆಕಸ್ಮಿಕವಾಗಿ ಟಾಯ್ಲೆಟ್ ಕ್ಲೀನರ್ ಸಿಡಿದು ಕಾರ್ನಿಯಾ ಹಾನಿಯಾಗಿದೆ

ಪಾರುಲ್ ಮಂಡಲ್ ಸೀತಾಳೆ ಸಿಡುಬು ಕಾಯಿಲೆಗೆ ಚಿಕಿತ್ಸೆ ಪಡೆದ ನಂತರ ಕಾರ್ನಿಯಲ್ ಸಮಸ್ಯೆಯನ್ನು ಎದುರಿಸಿದರು . ಈಗ ಅವ ರಿಗೆ ಬೆಳಕನ್ನು ತಡೆ ಯಲು ಸಾಧ್ಯ ವಾಗುವುದಿ ಲ್ಲ , ಮತ್ತು ಶಸ್ತ್ರಚಿಕಿತ್ಸೆ ಯಿಂದಲೂ ದೃಷ್ಟಿಯನ್ನು ಮರಳಿ ಪಡೆಯಲು ಸಾಧ್ಯವಿಲ್ಲ

ದೃಷ್ಟಿ ತೀಕ್ಷ್ಣತೆಯನ್ನು ಅಳೆಯಲು ಸ್ನೆಲೆನ್ ಚಾರ್ಟ್ ಬಳಸ ಲಾಗುತ್ತದೆ . ಡಚ್ ನೇತ್ರತಜ್ಞ ಹರ್ಮನ್ ಸ್ನೆಲೆನ್ ಇದನ್ನು 1862 ರಲ್ಲಿ ರಚಿಸಿದರು

ಡಾ. ಆಶಿಶ್ ಮಜುಂದಾರ್ ಅವರು ಆಂಟೆರಿಯರ್ ಸೆಗ್ಮೆಂಟ್ ಫೋಟೊಗ್ರಫಿ ನಿರ್ವಹಿಸುತ್ತಿದ್ದಾರೆ. ಕಣ್ಣುಗಳ ಆಂತರಿಕ ನೋಟ ಮತ್ತು ಮುಖದ ರಚನೆಗಳಿಗಿಂತ ಬಾಹ್ಯ ನೋಟವನ್ನು ದಾಖಲಿಸಲು ಈ ತಂತ್ರವನ್ನು ಬಳಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಕಣ್ಣು ಅಥವಾ ಸುತ್ತಮುತ್ತಲಿನ ಅಂಗಾಂಶಗಳ ಗಾಯಗಳನ್ನು ದಾಖಲಿಸಲು , ಮುಖದ ನರ ವೈಪರೀತ್ಯಗಳನ್ನು ನೋಡಲು ಮತ್ತು ಕಣ್ಣುಗಳು ಅಥವಾ ಕಣ್ಣುರೆಪ್ಪೆಗಳ ಶಸ್ತ್ರಚಿಕಿತ್ಸೆಯ ಪೂರ್ವ ಮತ್ತು ನಂತರದ ಜೋಡಣೆಯನ್ನು ದಾಖಲಿಸಲು ಬಳಸಲಾಗುತ್ತದೆ

ಕಾರ್ನಿಯಾ ಕಸಿ ಶಸ್ತ್ರಚಿಕಿತ್ಸೆಯು ಹಾನಿಗೊಳಗಾದ ಕಾರ್ನಿಯಾದ ಎಲ್ಲಾ ಅಥವಾ ಭಾಗವನ್ನು ತೆಗೆದುಹಾಕುವುದು ಮತ್ತು ಅದನ್ನು ದಾನಿ ಯ ಆರೋಗ್ಯಕರ ಅಂಗಾಂಶ ದೊಂದಿಗೆ ಬದಲಾಯಿಸುವುದನ್ನು ಒಳಗೊಂಡಿರುತ್ತದೆ

ಡಾ . ಪದ್ಮಪ್ರಿಯಾ ಅವರು ಕಾರ್ನಿಯಲ್ ಕಸಿ ಮಾಡಿದ ರೋಗಿ ಯ ಕಣ್ಣಿ ಗೆ ರಕ್ಷಣಾತ್ಮಕ ಲೆನ್ಸ್ ಸೇರಿಸುತ್ತಿದ್ದಾರೆ

ʼ ಈಗ ನಾನು ಚೆನ್ನಾಗಿದ್ದೇನೆ. ಕನ್ನಡಕದ ಅಗತ್ಯವಿಲ್ಲದೆ ದೂರದಲ್ಲಿರುವುದನ್ನು ಓದಬಲ್ಲ. ಬೆಳಕನ್ನು ನೋಡಿದರೆ ನೋವಿನ ಅನುಭವವಾಗುವುದಿಲ್ಲ ʼ ಎಂದು 14 ವರ್ಷದ ಪಿಂಟು ರಾಜ್ ಸಿಂಗ್ ಹೇಳುತ್ತಾ ನೆ

ಹೂಗ್ಲಿ ಜಿಲ್ಲೆಯ ಬಿನಯ್ ಪಾಲ್ ಅವರ ಕಾರ್ನಿಯಲ್ ಕಾಯಿಲೆಗೆ ಚಿಕಿತ್ಸೆ ಪಡೆದ ನಂತರ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ; ಅವ ರು ತನ್ನ ದೃಷ್ಟಿಯನ್ನು ಮರಳಿ ಪಡೆದಿದ್ದಾ ರೆ
ಅನುವಾದ : ಶಂಕರ . ಎನ್ . ಕೆಂಚನೂರು